ಸಿಗ್ನಸ್
	ಉತ್ತರ ಖಗೋಳಾಕಾಶದ ಸುವ್ಯಕ್ತ ಬೃಹತ್ ನಕ್ಷತ್ರಪುಂಜಗಳ ಪೈಕಿ ಒಂದು. ಇದರ ಭಾರತೀಯ ಹೆಸರು ರಾಜಹಂಸ. ಕೆಲವೊಮ್ಮೆ ಇದನ್ನು ಉತ್ತರದ ಶಿಲುಬೆ (ನಾರ್ತರ್ನ್ ಕ್ರಾಸ್) ಎಂದು ಹೇಳುವುದುಂಟು. ದಕ್ಷಿಣ ಶಿಲುಬೆ (ಕ್ರಕ್ಸ್ ಸದರ್ನ್ ಕ್ರಾಸ್, ತ್ರಿಶಂಕು) ಆಕಾರದಲ್ಲಿ ನಕ್ಷತ್ರಪುಂಜಕ್ಕಿಂತಲೂ ಅಧಿಕಸ್ಥೂಲವಾಗಿದೆ. ಘಂಟಾ ವೃತ್ತಾಂಶ 19ಗಂ. 5ಮಿ - 22ಗಂ.; ವಿಷುವದಂಶ 28º-60ºಉ. ನಾಲ್ಕನೆಯ ಕಾಂತಿಮಾನಕ್ಕೆ ಮಿಗಿಲಾದ ಕಾಂತಿಮಾನವುಳ್ಳ 7 ನಕ್ಷತ್ರಗಳು ಈ ರಾಶಿಯಲ್ಲಿವೆ. ಚಿ (ಡೆನಬ್-ಹಂಸಾಕ್ಷಿ) ನಕ್ಷತ್ರ 1ನೆಯ ಕಾಂತಿಮಾನದ್ದು; ¡ (ಸಾಡ್ರ್), e (ಗ್ರೀನಾ) ಮತ್ತು ಜ ನಕ್ಷತ್ರಗಳು 2ನೆಯ ಕಾಂತಿಮಾನದವು; b (ಅಲ್‍ಬೈರಿಯೊ) ನಕ್ಷತ್ರ 3ನೆಯ ಕಾಂತಿಮಾನದ್ದು. ಈ ನಕ್ಷತ್ರಗಳ ಪುಂಜದ ಆಕಾರವನ್ನು ಶಿಲುಬೆಯಂತಾ ಗಿರುವುದುರಿಂದ ಉತ್ತರದ ಶಿಲುಬೆ ಎಂಬ ಹೆಸರು ಅನ್ವರ್ಥವಾಗಿದೆ.  ನಕ್ಷತ್ರಗಳು ಶಿಲುಬೆಯ ನೀಳಬಾಹುವನ್ನೂ  ನಕ್ಷತ್ರಗಳು ಶಿಲುಬೆಯ ಅಡ್ಡಬಾಹುವನ್ನೂ ನಿರೂಪಿಸುತ್ತವೆ. 

	ಡೆನಬ್ ನಕ್ಷತ್ರ (ಚಿ) ಅತ್ಯಂತ ಪ್ರಕಾಶಮಾನವಾದ ರಕ್ತದೈತ್ಯ್ರ. ಕಾಂತಿಮಾನ 1.26. ಸೂರ್ಯನಿಂದ 1600 ಜ್ಯೋತಿರ್ವರ್ಷ ದೂರದಲ್ಲಿದೆ. ಆಲ್‍ಬೈರಿಯಾ (b) ಎಂಬುದು ಮನಮೋಹಕ ಯಮಳತಾರೆ (ಬೈನರಿ). ಇದಲ್ಲದೆ ಇನ್ನಿತರ ಗಮನಾರ್ಹ ಯಮಳತಾರೆಗಳೂ ಮೈರನಕ್ಷತ್ರವೂ (ಬೈ ಸಿಗ್ನಿ) ಸೇರಿದಂತೆ ಕೆಲವು ಚಂಚಲತಾರೆಗಳೂ ಇವೆ. SS ಸಿಗ್ನಿ ಎಂಬುದು ಅತ್ಯಂತ ಪ್ರಕಾಶಮಾನವಾದ ಕುಬ್ಜ ನವತಾರೆ. P ಸಿಗ್ನಿ ಎಂಬುದು ಅಧಿಕ ಪ್ರಕಾಶದಿಂದ ಕೂಡಿದ, ಆದರೆ ಅಸ್ಥಿರ ತಾರೆ. ಒ 39 ಎಂಬುದು ದೊಡ್ಡ ವಿವೃತಗುಚ್ಛ. ಇವಲ್ಲದೆ ಹಲವು ಪ್ರಕಾಶಮಾನ ಉತ್ಸರ್ಜನ ನೀಹಾರಿಕೆಗಳುಳ್ಳ ಸಿಗ್ನಸ್ ಕುಣಿಕೆಯನ್ನು (ಸಿಗ್ನಸ್ ಲೂಪ್) ಈ ಪುಂಜ ಒಳಗೊಂಡಿದೆ. 61 ಸಿಗ್ನಿ ಎಂಬ ನಕ್ಷತ್ರವನ್ನೂ ಅಧಿಕ ವಿಕಿರಣಸಾಮಥ್ರ್ಯದ ರೇಡಿಯೊ ಆಕರ ಎಂದೆನಿಸುವ ಸಿಗ್ನಸ್ ಂ ಎಂಬ ಕಾಯವನ್ನೂ ಸಿಗ್ನಸ್ ಘಿ-1, ಸಿಗ್ನಸ್ ಘಿ-3, ಎಂಬ ಎಕ್ಸ್-ಕಿರಣ ಯಮಳತಾರೆಗಳನ್ನೂ ಈ ಪುಂಜದಲ್ಲಿ ಪತ್ತೆ ಮಾಡಲಾಗಿದೆ. ಸಿಗ್ನಸ್ ಘಿ-1, ಮತ್ತು ಕಾಯ ಗಿ 404 ಎಂಬವನ್ನು ಭವಿಷ್ಯತ್ತಿನ ಕೃಷ್ಣವಿವರಗಳು (ಬ್ಲ್ಯಾಕ್ ಹೋಲ್ಸ್) ಎನ್ನಲಾಗಿದೆ. 
(ನೋಡಿ- ಎಕ್ಸ್‍ಕಿರಣ-ಖಗೋಳಶಾಸ್ತ್ರ)								
		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	*